Saturday, November 16, 2013

Saturday, November 9, 2013

KRVP Karnataka State level Degree Students project Exhibition-I

ಪದವಿ ವಿದ್ಯಾರ್ಥಿಗಳ ರಾಜ್ಯ ಮಟ್ಟದ ವಿಜ್ಞಾನ ವಸ್ತು ಪ್ರದರ್ಶನ ಉದ್ಘಾಟನೆ
ಜ್ಞಾನ ವಿಜ್ಞಾನ ಎರಡು ಕಣ್ಣುಗಳಿದ್ದಂತೆ
- ಟಿ.ಎನ್. ಪ್ರಭಾಕರ

ಹೊಸಪೇಟೆ - ೦೯.೧೧.೨೦೧೩

                ಜ್ಞಾನ ವಿಜ್ಞಾನ ಎರಡು ಕಣ್ಣುಗಳಂತೆ ಮನುಷ್ಯನಿಗೆ ಅಗತ್ಯವಾಗಿದೆ ಎಂದು ಕಾಲೇಜು ಶಿಕ್ಷಣ ಇಲಾಖೆಯ ಹೆಚ್ಚುವರಿ ನಿರ್ದೇಶಕ ಟಿ.ಎನ್. ಪ್ರಭಾಕರ ಹೇಳಿದರು.



ಅವರು ಕರ್ನಾಟಕ ರಾಜ್ಯ ವಿಜ್ಙಾನ ಪರಿಷತ್ತು, ಕಾಲೇಜು ಶಿಕ್ಷಣ ಇಲಾಖೆ ಹಾಗು ಕರ್ನಾಟಕ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಗಳು ಸಂಯುಕ್ತವಾಗಿ ಹೊಸಪೇಟೆಯ ಪ್ರೌಢದೇವರಾಯ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಆಯೋಜಿಸಿರುವ ಎರಡು ದಿನಗಳ ಪದವಿ ವಿದ್ಯಾರ್ಥಿಗಳ ರಾಜ್ಯ ಮಟ್ಟದ ವಿಜ್ಞಾನ ವಸ್ತು ಪ್ರದರ್ಶನವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.

ವಿಜ್ಞಾನದ ಅವಿಷ್ಕಾರಗಳು ವಿದೇಶಗಳಲ್ಲೇ ಆಗಿವೆ ಎಂಬ ಭಾವನೆಯನ್ನು ನಮ್ಮ ಪಠ್ಯ ಪುಸ್ತಕಗಳು ಬಿಂಬಿಸುತ್ತಿವೆ. ಆದರೆ ವಿಜ್ಞಾನಕ್ಕೆ ನಮ್ಮ ಪ್ರಾಚೀನ ಭಾರತೀಯರ ಕೊಡುಗೆ ಅತ್ಯಂತ ಮಹತ್ವದ್ದಾಗಿದ್ದು, ನಮ್ಮ ಮಕ್ಕಳಿಗೆ ಈ ಬಗ್ಗೆ ಜಾಗೃತಿ ಮೂಡಿಸುವ ಅಗತ್ಯವಿದೆ ಎಂದು ಅವರು ಅಭಿಪ್ರಾಯ ಪಟ್ಟರು.

                ಮಂಗಳಯಾನಕ್ಕೆ ಇಸ್ರೊ ೪೫೦ ಕೋಟಿ ವೆಚ್ಚ ಮಾಡಿದ್ದನು ಟೀಕಿಸಿದವರು, ದೀಪಾವಳಿಯಂದು ಭಾರತೀಯರು ೫೦೦೦ ರೂ. ಕೋಟಿಯಷ್ಟು ಪಟಾಕಿಯನ್ನು ಸುಟ್ಟಿದ್ದಲ್ಲದೆ ಶಬ್ದ ಮಾಲಿನ್ಯ, ವಾಯು ಮಾಲಿನ್ಯ ಉಂಟು ಮಾಡಿದರು ಎಂಬುದನ್ನು ಗಮನಿಸಬೇಕು; ನಮ್ಮ ಅರಿವಿನ ವಿಸ್ತಾರ ಹೆಚ್ಚಿಸುವ ವಿಜ್ಞಾನದ ಬೆಳವಣಿಗೆಗಾಗಿ ಮಾಡುವ ವೆಚ್ಚ ವ್ಯರ್ಥವಲ್ಲ ಎಂದು ಅವರು ನುಡಿದರು.
               
                ವೀ.ವಿ.ಸಂಘದ ಅಧ್ಯಕ್ಷರಾದ ಶ್ರೀ ಅಲ್ಲಂ ಗುರುಬಸವರಾಜರವರು ವೈಜ್ಞಾನಿಕ ಮನೋಭಾವ ಬೆಳಸುವ ಕಾರ್ಯಕ್ರಮಗಳು ಹಿಂದುಳಿದ ಹೈ.ಕ.ಭಾಗದಲ್ಲಿ ಹೆಚ್ಚಾಗಿ ನಡೆಯಬೇಕೆಂದು ತಿಳಿಸಿದರು. ವೀ.ವಿ.ಸಂಘದ ಕಾರ್ಯದರ್ಶಿ ಶ್ರೀ ಹೆಚ್.ಎಂ.ಗುರುಸಿದ್ದಸ್ವಾಮಿಯವರು ಮಾತನಾಡಿ ನೋಡಿಕಲಿ-ಮಾಡಿತಿಳಿ ಎಂಬಂತೆ  ವಿದ್ಯಾರ್ಥಿUಳಿಗೆ ಪ್ರ್ರಾಯೋಗಿಕ ಅನುಭವ ನೀಡುವ ದಿಕ್ಕಿನಲ್ಲಿ ವಿಜ್ಞಾನದ ಶಿಕ್ಷಣ ಪ್ರಯತ್ನಿಸಬೇಕೆಂದು ಹೇಳಿದರು. ರಾಷ್ಟ್ರೀಯ ಹೆದ್ದಾರಿ ವಿಶೇಷ ಭೂ ಸ್ವಾಧೀನಧಿಕಾರಿ ಬಿ.ಆರ್.ಸೋಮಣ್ಣನವರು ಮಾತನಾಡಿ ಮೂಲವಿಜ್ಞಾನ ಶಿಕ್ಷಣದತ್ತ ವಿದ್ಯಾರ್ಥಿಗಳನ್ನು ಆಕರ್ಷಿಸುವ ಅಗತ್ಯವಿದ್ದು, ಈ ದಿಸೆಯಲ್ಲಿ ಇಂತಹ ಪ್ರದರ್ಶಗಳು ಪ್ರೇರಣೆ ನೀಡುತ್ತವೆ ಎಂದು ನುಡಿದರು.

ಅಧ್ಯಕ್ಷತೆ ವಹಿಸಿದ್ದ ಪ್ರೊ.ಎಸ್.ವಿ.ಸಂಕನೂರ ಮಾತನಾಡಿ ವಿದ್ಯಾರ್ಥಿಗಳಲ್ಲಿರುವ ಸುಪ್ತ ಪ್ರತಿಭೆಯನ್ನು ಗುರುತಿಸಿ, ಪ್ರೋತ್ಸಾಹಿಸಲು ಕರ್ನಾಟಕ ರಾಜ್ಯ ವಿಜ್ಙಾನ ಪರಿಷತ್ತು ವಿಜ್ಞಾನ ವಸ್ತು ಪ್ರದರ್ಶನಗಳನ್ನು ಹಮ್ಮಿಕೊಂಡಿದೆ. ಕೇವಲ ಪರೀಕ್ಷೆ, ಉದ್ಯೋಗಗಳನ್ನು ಮಾತ್ರ ಗುರಿಯನ್ನಾಗಿಟ್ಟುಕೊಳ್ಳದೆ, ವಿಜ್ಞಾನ ವಿದ್ಯಾರ್ಥಿಗಳು ಸಮಾಜಕ್ಕೆ ಉಪಯುಕ್ತ ಕೊಡುಗೆ ನೀಡುವತ್ತ ಚಿಂತಿಸಬೇಕು ಎಂದು ಕರೆ ನೀಡಿದರು.

                ಕಾರ್ಯಕ್ರಮದಲ್ಲಿ ಪಿ.ಡಿ.ಐ.ಟಿ. ಆಡಳಿತ ಮಂಡಳಿ ಅಧ್ಯಕ್ಷರಾದ ಶ್ರೀ ಅರವಿ ಬಸವನಗೌಡ ಉಪಸ್ಥಿತರಿದ್ದರು. ಕ.ರಾ.ವಿ.ಪ. ಸಂಯೋಜಕರಾದ ಡಾ|| ಕುಂಟೆಪ್ಪ ಗೌರಿಪುರ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರಾಚಾರ್ಯರಾದ ಪ್ರೊ. ಪಾರ್ವತಿ ಕಡ್ಲಿ ಸ್ವಾಗತಿಸಿದರು. ಪ್ರಭುರಾಜ ಪಾಟೀಲ ನಿರೂಪಿಸಿದರು. ಎಸ್.ಎಂ.ಕೊಟ್ರಸ್ವಾಮಿ ವಂದಿಸಿದರು. ಪಿ.ಡಿ.ಐ.ಟಿ.ಯ ಅಧ್ಯಾಪಕರಾದ ಡಾ.ಎನ್.ಎಂ.ನಾಗಭೂಷಣ, ಮದ್ವರಾಜ, ಸಂಗಮೇಶ, ಮಾಲತೇಶ, ಡಾ.ವೀರಬಸವಂತಸ್ವಾಮಿ ಕಾರ್ಯಕ್ರಮ ನಿರ್ವಹಿಸಿದರು.

ಉದ್ಘಾಟನೆಯ ನಂತರ ಪಕ್ಷಿತಜ್ಞರಾದ ಕೆ.ಎಸ್.ಅಬ್ದುಲ್ ಸಮದ್‌ರವರು ಅಳಿವಿನಂಚಿನಲ್ಲಿರುವ ವನ್ಯಜೀವಿಗಳ ಸಂರಕ್ಷu’ ವಿಷಯದ ಕುರಿತು ಉಪನ್ಯಾಸ ನೀಡಿದರು. ಮಂಗಳೂರು, ಉಡುಪಿ, ಗುಲ್ಬರ್ಗಾ, ಬೆಳಗಾವಿ, ಬಳ್ಳಾರಿ, ಕೊಪ್ಪಳ ಮುಂತಾದ ೩೦ಕ್ಕೂ ಹೆಚ್ಚು ಪದವಿ ವಿದ್ಯಾರ್ಥಿಗಳ ತಂಡಗಳು ವಿಜ್ಞಾನ ಮಾದರಿಗಳನ್ನು ಪ್ರದರ್ಶಿಸಿದ್ದಾರೆ.
    

¥ÀzÀ« «zÁåyðUÀ¼À gÁdå ªÀÄlÖzÀ «eÁÕ£À ªÀ¸ÀÄÛ ¥ÀæzÀ±Àð£À GzÁÏn¸ÀÄwÛgÀĪÀ PÁ¯ÉÃdÄ ²PÀët E¯ÁSÉAiÀÄ ºÉZÀÄѪÀj ¤zÉÃð±ÀPÀ n.J£ï. ¥Àæ¨sÁPÀgÀ. C®èA UÀÄgÀħ¸ÀªÀgÁd, ºÉZï.JA.UÀÄgÀĹzÀݸÁé«Ä, CgÀ« §¸ÀªÀ£ÀUËqÀ, ©.Dgï.¸ÉÆêÀÄtÚ, ¥ÉÆæ.J¸ï.«.¸ÀAPÀ£ÀÆgÀ, qÁ|| PÀÄAmÉ¥Àà UËj¥ÀÄgÀ, qÁ.J£ï.JA.£ÁUÀ¨sÀƵÀt ªÀÄÄAvÁzÀªÀgÀÄ G¥À¹ÜvÀjzÀzÀgÀÄ.


¥ÀzÀ« «zÁåyðUÀ¼À gÁdå ªÀÄlÖzÀ «eÁÕ£À ªÀ¸ÀÄÛ ¥ÀæzÀ±Àð£À VqÀÀUÀ½UÉ ¤ÃgÉgÉzÀÄ ¸ÁAPÉÃwPÀªÁV GzÁÏn¸ÀÄwÛgÀĪÀ «Ã.«.¸ÀAWÀzÀ PÁAiÀÄðzÀ²ðÀ ²æà ºÉZï.JA.UÀÄgÀĹzÀݸÁé«ÄAiÀĪÀgÀÄ. PÁ¯ÉÃdÄ ²PÀët E¯ÁSÉAiÀÄ ºÉZÀÄѪÀj ¤zÉÃð±ÀPÀ n.J£ï. ¥Àæ¨sÁPÀgÀ. C®èA UÀÄgÀħ¸ÀªÀgÁd, CgÀ« §¸ÀªÀ£ÀUËqÀ, ©.Dgï.¸ÉÆêÀÄtÚ, ¥ÉÆæ.J¸ï.«.¸ÀAPÀ£ÀÆgÀ, qÁ|| PÀÄAmÉ¥Àà UËj¥ÀÄgÀ, qÁ.J£ï.JA.£ÁUÀ¨sÀƵÀt ªÀÄÄAvÁzÀªÀgÀÄ G¥À¹ÜvÀjzÀzÀgÀÄ. 

KRVP Karnataka State level Degree Students project Exhibition-2

¥ÀzÀ« «zÁåyðUÀ¼À gÁdå ªÀÄlÖzÀ «eÁÕ£À ªÀ¸ÀÄÛ ¥ÀæzÀ±Àð£ÀzÀ°è 
«eÁÕ£À ªÀiÁzÀjUÀ¼À£ÀÄß ¥ÀæzÀ±Àðê¸ÀÄwÛgÀĪÀ «zÁåyðUÀ¼ÀÄ.

KRVP Karnataka State level Degree Students project Exhibition