Monday, April 29, 2013

Parikrama-2013 Report

ಪ್ರೌಢದೇವರಾಯ ತಾಂತ್ರಿಕ ಮಹಾವಿದ್ಯಾಲಯ, ಹೊಸಪೇಟೆ.
 “ಪರಿಕ್ರಮ-2013”

ಅವಕಾಶಗಳನ್ನು ಗುರುತಿಸಿರಿ;
ಯಶಸ್ಸಿಗೆ ಪರಿವರ್ತಿಸಿರಿ

ಹೊಸಪೇಟೆ : 29.04.2013
ತಾಂತ್ರಿಕÀತೆಯು ಹಿಂದೆಂದಿಗಿಂತ ಇಂದು ಅತ್ಯಂತ ವೇಗವಾಗಿ ಬದಲಾಗುತ್ತಿದೆ. ಚಲನಶೀಲವಾದ ತಂತ್ರe್ಞÁನ ಜಗತ್ತಿನಲ್ಲಿ ಅಪರಿಮಿತ ಅವಕಾಶಗಳಿವೆ; ಅವುಗಳನ್ನು ಗುರುತಿಸಿ ಯಶಸ್ಸಾಗಿ ಪರಿವರ್ತಿಸಿಕೊಳ್ಳಿರಿ ಎಂದು ಜೆ.ಎಸ್.ಡಬ್ಲೂ. ಸ್ಟೀಲ್ಸ್ ಕಂಪನಿಯ ಹಿರಿಯ ಉಪಾಧ್ಯಕ್ಷರಾದ ಶ್ರೀ ಪಿ.ರಾಜಶೇಖರ್ ತಾಂತ್ರಿಕ ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಅವರು ಹೊಸಪೇಟೆಯ ಪ್ರೌಢದೇವರಾಯ ತಾಂತ್ರಿಕ ಮಹಾವಿದ್ಯಾಲಯದ ವಾರ್ಷಿಕೋತ್ಸವ “ಪರಿಕ್ರಮ–2013”ದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡುತ್ತಿದ್ದರು.

ತಾಂತ್ರಿಕತೆಯ ಕೊಡುಗೆಗಳು ಜನಸಾಮಾನ್ಯರ  ಬದುಕನ್ನು ಸುಧಾರಿಸುವಲ್ಲಿ ಮಹತ್ತರ ಪಾತ್ರ ವಹಿಸುತ್ತಿವೆ. ನಾವು ಈ ಜಗತ್ತನ್ನು ಬಿಟ್ಡು ಹೋಗುವಾಗ ಇದನ್ನು ಮತ್ತಷ್ಟು ಸುಧಾರಿಸಿದ ಸಂತೃಪ್ತಿ ನಮ್ಮದಾಗಬೇಕು ಎಂದು ಅವರು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ಹಿಂದೆ ಬಿ.ಇ. ಪದವಿ ಮುಗಿಸಿದರೆ 30 ವರ್ಷಗಳ ವೃತ್ತಿ ಜೀವನ ಸುಗಮವಾಗಿ ನಡೆಯುತ್ತಿತು; ಆದರೆ ಇಂದು ತಾಂತ್ರಿಕ ವಿದ್ಯಾರ್ಥಿಗಳು ನಿರಂತರ ಕಲಿಯುತ್ತಲೇ ಇರಬೇಕಾದ ಅನಿವಾರ್ಯತೆ ಇದೆ. ಅದೇ ಎಂಜಿನೀಯರ್ ಗಳ ಯಶಸ್ಸಿನ ರಹಸ್ಯ ಎಂದು  ಮತ್ತೊಬ್ಬ ಅತಿಥಿ ಎಂ.ಎಸ್ಪಿ.ಎಲ್. ಕಂಪೆನಿಯ ಮ್ಯಾನೇಜರ್ ಆಶಿಶ್ ಮಿಶ್ರಾ ತಿಳಿಸಿದರು.

ಅತಿ ಹೆಚ್ಚು ಅಂಕ ಗಳಿಸಿದ ಆರು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಎಂ.ಎಸ್,ಪಿ.ಎಲ್. ಚಿನ್ನದ ಪದಕಗಳನ್ನು ಸಮಾರಂಭದಲ್ಲಿ ವಿತರಿಸಲಾಯಿತು.

ವೀ.ವಿ.ಸಂಘದ ಅಧ್ಯಕ್ಷರಾದ ಶ್ರೀ ಅಲ್ಲಂ ಗುರುಬಸವರಾಜ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಆರಂಭದಲ್ಲಿ ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷರಾದ ಶ್ರೀ ಅರವಿ ಬಸವನಗೌಡರು ಸ್ವಾಗತಿಸಿದರು. ಪ್ರೊ.ಎಸ್.ಎಂ.ಶಶಿಧರ್ ಅತಿಥಿಗಳನ್ನು ಸಭೆಗೆ ಪರಿಚಯಿಸಿದರು. ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಪಾರ್ವತಿ ಕಡ್ಲಿ ವಾರ್ಶಿಕ ವರದಿ ಮಂಡಿಸಿದರು.ವೀ.ವಿ.ಸಂಘದ ಗೌರವ ಕಾರ್ಯದರ್ಶಿಗಳಾದ ಶ್ರೀ ಎಚ್.ಎಂ.ಗುರುಸಿದ್ದಸ್ವಾಮಿ, ಸಹ ಕಾರ್ಯದರ್ಶಿಗಳಾದ ಶ್ರೀ ಜೆ.ಎಸ್.ನೇಪಾಕ್ಷಪ್ಪ ಮಾತನಾüಡಿದರು. ಆಡಳಿತ ಮಂಡಳಿ ಸದಸ್ಯರುಗಳಾದ ಶ್ರೀ ಜಾಲಿ ಬಸವರಾಜ, ಶ್ರೀ ಕೆ.ಬಿ.ಶ್ರೀನಿವಾಸ ರೆಡ್ಡಿ, ಪರಿಕ್ರಮ ಸಂಚಾಲಕ ಪ್ರೊ.ಶಿವಪ್ರಕಾಶ ಸ್ವಾಮಿ ಉಪಸ್ಥಿತರಿದ್ದರು.

No comments:

Post a Comment