Wednesday, April 24, 2013

Parikrama-2013 Invitation


ಎಪ್ರಿಲ್ 28ರಂದು “ಪರಿಕ್ರಮ-2013”

ಹೊಸಪೇಟೆ : 26.04.2013
ಹೊಸಪೇಟೆಯ ಪ್ರೌಢದೇವರಾಯ ತಾಂತ್ರಿಕ ಮಹಾವಿದ್ಯಾಲಯದ ವಾರ್ಷಿಕೋತ್ಸವÀ “ಪರಿಕ್ರಮ–2013”ನ್ನು ದಿನಾಂಕ 28.04.2013 ಭಾನುವಾರ ಸಂಜೆ 5.30ಕ್ಕೆ ಆಯೋಜಿಸಲಾಗಿದೆ. ಜೆ.ಎಸ್.ಡಬ್ಲೂ. ಸ್ಟೀಲ್ಸ್ ಕಂಪನಿಯ ಹಿರಿಯ ಉಪಾಧ್ಯಕ್ಷರಾದ ಶ್ರೀ ಪಿ.ರಾಜಶೇಖರ್ ಸಮಾರಂಭದ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ವೀ.ವಿ.ಸಂಘದ ಅಧ್ಯಕ್ಷರಾದ ಶ್ರೀ ಅಲ್ಲಂ ಗುರುಬಸವರಾಜ ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದಾರೆ. 

ವೀ.ವಿ.ಸಂಘದ ಉಪಾಧ್ಯಕ್ಷರಾದ ಶ್ರೀ ಕೆ.ಎಂ.ಮಹೇಶ್ವರಸ್ವಾಮಿ, ಗೌರವ ಕಾರ್ಯದರ್ಶಿಗಳಾದ ಶ್ರೀ ಎಚ್.ಎಂ.ಗುರುಸಿದ್ದಸ್ವಾಮಿ, ಸಹ ಕಾರ್ಯದರ್ಶಿಗಳಾದ ಶ್ರೀ ಜೆ.ಎಸ್.ನೇಪಾಕ್ಷಪ್ಪ, ಕೋಶಾಧಿಕಾರಿಗಳಾದ ಶ್ರೀ ಸಂಗನಕಲ್ ಹಿಮಂತರಾಜ, ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷರಾದ ಶ್ರೀ ಅರವಿ ಬಸವನಗೌಡರು ಹಾಗು ಆಡಳಿತ ಮಂಡಳಿ ಸದಸ್ಯರುಗಳಾದ ಶ್ರೀ ಜಾಲಿ ಬಸವರಾಜ, ಶ್ರೀ ಕೆ.ಬಿ.ಶ್ರೀನಿವಾಸ ರೆಡ್ಡಿ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಪಾರ್ವತಿ ಕಡ್ಲಿ ತಿಳಿಸಿದ್ದಾರೆ.



No comments:

Post a Comment