Saturday, May 5, 2012

ಯಶಸ್ಸಿಗೆ ಬೇಕು ಅಂತಃಸತ್ವ­­­­­­­­ -ರವಿ ಗುಮಾಸ್ತೆ

ಯಶಸ್ಸಿಗೆ ಬೇಕು ಅಂತಃಸತ್ವ­­­­­­­­
-ರವಿ ಗುಮಾಸ್ತೆ
“ಜೀವನದಲ್ಲಿ ಯಶಸ್ಸು ಸಾಧಿಸಲು ಮುಖ್ಯವಾಗಿ ಬೇಕಿರುವುದು ಅಂತಃಸತ್ವ; ನಮ್ಮ ಬಾಹ್ಯ ರೂಪ ಬಣ್ಣಗಳು ಮುಖ್ಯವಲ್ಲ” ಎಂದು ಕೊಪ್ಪಳದ ಕಿರ್ಲೋಸ್ಕರ್ ಫೆರಸ್ ಇಂಡಸ್ಟ್ರಿ ಲಿಮಿಟೆಡ್ ನ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ ಅರ್.ವಿ.ಗುಮಾಸ್ತೆ ತಿಳಿಸಿದರು.

ಅವರು ಹೊಸಪೇಟೆಯ ಪ್ರೌಢದೇವರಾಯ ತಾಂತ್ರಿಕ ಮಹಾವಿದ್ಯಾಲಯದ ವಾರ್ಷಿಕೋತ್ಸವ ಸಮಾರಂಭ  ‘ಪರಿಕ್ರಮ- 2012’ ರ ಅಂಗವಾಗಿ ಕ್ರೀಡಾ ಸ್ಫರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ಬಹುಮಾನ ವಿತರಣಾ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡುತ್ತಿದ್ದರು.

“ಜೀವನಕ್ಕೆ ಗುರಿಗಳಿರಲಿ. ಗುರಿಗಳಿದ್ದರೆ ಮಾತ್ರ ಯಶಸ್ಸು ಸಾಧ್ಯ. ವ್ಯಕ್ತಿಗತ ಗುರಿ, ವೃತ್ತಿಯಲ್ಲಿ ಶ್ರೇಷ್ಠತೆ ಸಾಧಿಸುವ ಗುರಿ ಹಾಗೂ ಇವೆರಡರ ಜೊತೆ ಸಮುದಾಯ-ಸಮಾಜಕ್ಕೆ ಏನಾದರು ಕೊಡುಗೆ ನೀಡಬೇಕೆಂಬ ಗುರಿಯೂ ನಿಮಗಿರಲಿ” ಎಂದು ಅವರು ಹೇಳಿದರು.

 “ಇಂದು ಅವಕಾಶಗಳು ಆಕಾಶದಷ್ಟಿವೆ. ತಂದೆ ನಿವೃತ್ತಿಯ ಅಂಚಿನಲ್ಲಿ ಪಡೆಯುತ್ತಿದ್ದುದಕ್ಕ್ಕಿಂತ ಹೆಚ್ಚಿನ ಸಂಬಳವನ್ನು, ಮಗ, ಮಗಳು  ತಾಂತ್ರಿಕ ಪದವಿ ಪಡೆದ ಹೊಸತರಲ್ಲೇ ಗಳಿಸುವುದನ್ನು ನಾವು ಕಾಣುತ್ತೇವೆ. ಬಳ್ಳಾರಿ-ಹೊಸಪೇಟೆ ಪ್ರದೇಶವು ಕಬ್ಬಿಣದ ಅದಿರಿನಿಂದ ಶ್ರೀಮಂತವಾಗಿದೆ. ಕಬ್ಬಿಣವು ದೇಶದ ಮೂಲ ಸೌಕರ್ಯ ಅಬಿವೃದ್ಧಿಗೆ ಅತ್ಯಗತ್ಯವಾದುದು. ಅದ್ದರಿಂದ ಈ ಪ್ರದೇಶವು ಕಬ್ಬಿಣ ವಲಯವಾಗಿ ಮತ್ತಷ್ಟು ಬೆಳೆಯುವ ಉಜ್ವಲ ಸಾಧ್ಯತೆಗಳನ್ನು  ಹೊಂದಿದೆ’ ಎಂದು ಅವರ ತಿಳಿಸಿದರು.

 ಸಮಾರಂಭದ ಮತ್ತೊಬ್ಬ ಅತಿಥಿ ವೀ.ವಿ. ಸಂಘದ  ಗೌ. ಕಾರ್ಯದರ್ಶಿ  ಶ್ರೀ ಎಚ್.ಎಂ.ಗುರುಸಿದ್ಧ ಸ್ವಾಮಿ ಮಾತನಾಡಿ “ವಿಜಯನಗರ ಸಾಮ್ರಾಜ್ಯವು ಆರು ನೂರು ವರ್ಷಗಳ ಹಿಂದೆಯೇ ತಾಂತ್ರಿಕತೆಯ ಸಾಧನೆಯ ಮೂಲಕ  ಜಗತ್ತಿನ ಗಮನ ಸೆಳೆದಿತ್ತು. ಅಂಥ ಪರಂಪರೆಯಿಂದ  ನಮ್ಮ ನಾಡಿನ ತಾಂತ್ರಿಕ ವಿದ್ಯಾರ್ಥಿಗಳು ಸ್ಫೂರ್ತಿ ಪಡೆಯಬೇಕು” ಎಂದರು.

ಸಮಾರಂಭದ ಆಧ್ಯಕ್ಷತೆ ವಹಿಸಿದ್ದ ವೀರಶೈವ ವಿದ್ಯಾವರ್ಧಕ ಸಂಘದ  ಅಧ್ಯಕ್ಷರಾದ ಶ್ರೀ ಅಲ್ಲಂ ಗುರುಬಸವರಾಜ ಮಾತನಾಡಿ ತಂತ್ರಜ್ಞಾನದ ಈ ಯುಗದಲ್ಲಿ ತಂತ್ರಜ್ಞಾನವನ್ನು ಓದಿ ದೇಶಕ್ಕೆ ಕೀರ್ತಿ ತರಬೇಕೆಂದು ಕರೆ ನಿಡಿದರು. ಸಮಾರಂಭದ  ಲ್ಲಿ  ವೀ.ವಿ. ಸಂಘದ   ಸಹ ಕಾರ್ಯದರ್ಶಿ  ಜೆ.ಎಸ್.ನೇಪಾಕ್ಷಪ್ಪ, ಪಿ.ಡಿ.ಐ.ಟಿ.ಯ ಆಡಳಿತ ಮಂಡಳಿಯ ಸದಸ್ಯರಾದ ಜಾಲಿ ಬಸವರಾಜ, ಕೆ.ಬಿ.ಶ್ರೀನಿವಾಸ ರೆಡ್ಡಿ ಮಾತನಾಡಿದರು. ಆರಂಭದಲ್ಲಿ ಅಧ್ಯಕ್ಷ ಅರವಿ ಬಸವನ ಗೌಡ ಸ್ವಾಗತಿಸಿದರು. ಪ್ರಾಂಶುಪಾಲ ಡಾ.ಪಿ.ಖಗೆಶನ್ ಕ್ರೀಡಾ ಚಟುವಟಿಕೆಗಳ ವರದಿ ಮಂಡಿಸಿದರು. ಕ್ರೀಡಾ ಸ್ಫರ್ದೆಗಳಲ್ಲಿ ವಿಜೇತರಾದವರಿಗೆ ಬಹುಮನಗಳನ್ನು ವಿತರಿಸಲಾಯಿತು. ಕೊನೆಯಲ್ಲಿ ಪ್ರೊ.ಪಾರ್ವತಿ ಕಡ್ಲಿ ವಂದಿಸಿದರು. ಸಮಾರಂಭದ ನಂತರ ಜರುಗಿದ ವಿದ್ಯಾರ್ಥಿಗಳ ಸಾಂಸ್ಕೃತಿಕ ಕಾರ್ಯಕ್ರಮಗಳು ಪ್ರೇಕ್ಷಕರನ್ನು ರಂಜಿಸಿದವು.






ಹೊಸಪೇಟೆಯ ಪ್ರೌಢದೇವರಾಯ ತಾಂತ್ರಿಕ ಮಹಾವಿದ್ಯಾಲಯದ ವಾರ್ಷಿಕೋತ್ಸವ ಸಮಾರಂಭ  ‘ಪರಿಕ್ರಮ- 2012’ ರ ಅಂಗವಾಗಿ ಕ್ರೀಡಾ ಸ್ಫರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ಬಹುಮಾನ ವಿತರಣಾ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡುತ್ತಿರುವ ಕಿರ್ಲೋಸ್ಕರ್ ಫೆರಸ್ ಇಂಡಸ್ಟ್ರಿ ಲಿಮಿಟೆಡ್ ನ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ ಅರ್.ವಿ.ಗುಮಾಸ್ತೆ. ವೀರಶೈವ ವಿದ್ಯಾವರ್ಧಕ ಸಂಘದ  ಅಧ್ಯಕ್ಷರಾದ ಶ್ರೀ ಅಲ್ಲಂ ಗುರುಬಸವರಾಜ, ಗೌ. ಕಾರ್ಯದರ್ಶಿ  ಶ್ರೀ ಎಚ್.ಎಂ.ಗುರುಸಿದ್ಧ ಸ್ವಾಮಿ , ಸಹ ಕಾರ್ಯದರ್ಶಿ  ಜೆ.ಎಸ್.ನೇಪಾಕ್ಷಪ್ಪ, ಅರವಿ ಬಸವನ ಗೌಡ, ಆಡಳಿತ ಮಂಡಳಿಯ ಸದಸ್ಯರಾದ ಜಾಲಿ ಬಸವರಾಜ, ಕೆ.ಬಿ.ಶ್ರೀನಿವಾಸ ರೆಡ್ಡಿ, ಪ್ರಾಂಶುಪಾಲ ಡಾ.ಪಿ.ಖಗೆಶನ್, ಪ್ರೊ.ಪಾರ್ವತಿ ಕಡ್ಲಿ ಉಪಸ್ಥಿತರಿದ್ದರು.