Wednesday, July 11, 2012

ಮನಸೊರೆಗೊಂಡ ಶ್ರೀ ಕೃಷ್ಣ ಸಂಧಾನ

       ಕರ್ನಾಟಕ ಸಾಂಸ್ಕೃತಿಕ ಸಂಸ್ಥೆ ಮತ್ತು ಚೇತನ ಸಾಹಿತ್ಯ ಸಂಸ್ಥೆ ಹೊಸಪೇಟೆ ಇವುಗಳ ಸಹಯೋಗದಲ್ಲಿ ಎಂ.ಪಿ. ಪ್ರಕಾಶರ ನೆನಪಿನಲ್ಲಿ ನಡೆದ ರಂಗ ಪ್ರಕಾಶ - ೨೦೧೨ರ ಅಂಗವಾಗಿ ಆಟ ಮಾಟ ಸಾಂಸ್ಕೃತಿಕ ಪಥಧಾರವಾಡ ಇವರು ನಡೆಸಿಕೊಟ್ಟ ಶ್ರೀ ಕೃಷ್ಣ ಸಂಧಾನ ನಾಟಕವನ್ನು ಉತ್ತಂಗಿ ಕೊಟ್ರೇಶ್ರಘು ಗುಜ್ಜಲ್ಕೆ.ವೆಂಕಟೇಶ್, ಟಿ.ಎಚ್.ಬಸವರಾಜ, ಎಸ್.ಎಂ.ಶಶಿಧರ, ಎಚ್.ಎಂ.ಜಂಬುನಾಥ್, ವಿ.ಎಸ್.ಕುಮಠಳ್ಳಿಟಿ.ಎಂ.ನಾಗಭೂಷಣ ಮತ್ತಿತರರು ಹಾರ್ಮೋನಿಯಂ ನುಡಿಸುವುದರ ಮೂಲಕ ಉದ್ಘಾಟಿಸಿದರು. 

         ಪಾಂಡವರು ವನವಾಸದಿಂದ ಮರಳಿ ಬಂದು ಕೌರವರಿಗೆ ರಾಜ್ಯ ಬಿಟ್ಟುಕೊಡುವಂತೆ ಕೇಳಲು ಶ್ರೀ ಕೃಷ್ಣನನ್ನು ಸಂಧಾನಕ್ಕೆ ಕಳಿಸುವ ಮಹಾಭಾರತದ ಕತೆಯ, ವಿ.ಎನ್.ಅಶ್ವತ್ಥ ಅವರ ರಚನೆಯ ನಾಟಕವನ್ನು, ಒಂದೂವರೆ ಗಂಟೆ ಕಾಲ ಸೊಗಸಾಗಿ ಪ್ರದರ್ಶಿಸಿ ಹವ್ಯಾಸಿ ನಾಟಕದ ಸವಿಯುಣಿಸಿದರು. ಆಟ ಮಾಟ ತಂಡದಲ್ಲಿ ಒಬ್ಬ ಯುವತಿ ಸೇರಿ ೧೦ ಜನ ಯುವ ಕಲಾವಿದರಿದ್ದು, ಎಲ್ಲರೂ ರಂಗ ತರಬೇತಿ ಪಡೆದಿದ್ದಾರೆ.
       ಕೃಷ್ಣ (ಭಾಸ್ಕರ ನಾಗಮಂಗಲ), ದುಶ್ಯಾಸನ (ಮಾರಪ್ಪ ತುಮಕೂರು), ಧರ್ಮರಾಯ, ಶಕುನಿ (ಯತೀಶ ಕೊಳ್ಳೇಗಾಲ), ಭೀಮ (ವಿನೀತ ಚಿಕ್ಕಮಗಳೂರು), ಅರ್ಜುನ(ವಿಠ್ಠಲ ರಾಮದುರ್ಗ) ಪಾತ್ರಧಾರಿಗಳು ಗಮನ ಸೆಳೆದರು. ನಾಟಕ ಮಾಸ್ತರ ಪಾತ್ರದಲ್ಲಿ ಧನಂಜಯ ಪಾವಗಡ ಮನೋಜ್ಞವಾಗಿ ನಟಿಸಿದರು. ಉಳಿದಂತೆ ದ್ರೌಪತಿ ಮತ್ತು ರುಕ್ಮಿಣಿಯಾಗಿ ಪ್ರೇಮ ಸುಂಕದ ಹುಬ್ಬಳ್ಳಿ ಅಭಿನಯಿಸಿದರು.ಮಹಾಂತೇಶ ನಾಟಕಕ್ಕೆಬೆಳಕಿನ ಸಂಯೋಜನೆ ಮಾಡಿದರು. 



ಕರ್ನಾಟಕ ಸಾಂಸ್ಕೃತಿಕ ಸಂಸ್ಥೆ ಮತ್ತು ಚೇತನ ಸಾಹಿತ್ಯ ಸಂಸ್ಥೆ ಹೊಸಪೇಟೆ ಇವುಗಳ ಸಹಯೋಗದಲ್ಲಿ ಎಂ.ಪಿ. ಪ್ರಕಾಶರ ನೆನಪಿನಲ್ಲಿ ನಡೆದ ರಂಗ ಪ್ರಕಾಶ - ೨೦೧೨ರ ಅಂಗವಾಗಿ ಆಟ ಮಾಟ ಸಾಂಸ್ಕೃತಿಕ ಪಥ, ಧಾರವಾಡ ಇವರು ನಡೆಸಿಕೊಟ್ಟ ನಾಟಕದ ದೃಶ್ಯಗಳು.
  

  
  
  
   
  

  


  

No comments:

Post a Comment