Saturday, July 14, 2012

ಪತ್ರಿಕೆಗಳಲ್ಲಿ ಕಸಾಪ ಉದ್ಘಾಟನೆಯ ವರದಿ

  • Udayavani
    ಜೀವ ವಿರೋಧಿ ವಿಚಾರಗಳಿಗೆ ಡಾ| ತರೀಕೆರೆ ತೀವ್ರ ವಿರೋಧ

    • Udayavani | Jul 14, 2012
      ಹೊಸಪೇಟೆ: ಧರ್ಮ,ಜಾತಿಯಂತಹ ಕೆಡಕಿನ ಸಂಗತಿಗಳು ಹೆಚ್ಚು ರಾರಾಜಿಸುತ್ತಿವೆ. ಬರಹಗಾರರು ಇಂಥ ಜೀವ ವಿರೋಧಿ ಸಂಗತಿಗಳ ವಿರುದ್ಧ ಧ್ವನಿಯತ್ತಬೇಕಾಗಿದೆ ಎಂದು ಕನ್ನಡ ವಿಶ್ವವಿದ್ಯಾಲಯದ ಡಾ| ರಹಮತ್‌ ತರೀಕೆರೆ ಹೇಳಿದರು.
      ನಗರದ ಪ್ರೌಢದೇವರಾಯ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಜರುಗಿದ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
      ಪ್ರಭುತ್ವದ ಓಲೈಕೆ ಪ್ರಜಾnವಂತಿಕೆಯ ಲಕ್ಷಣವಲ್ಲ. ಆಲೋಚನೆ ಹಾಗೂ ಧೋರಣೆಗಳು ಮಾನವನ ಒಳಿತಿಗಾಗಿಯೇ ಬಳಕೆಯಾಗಬೇಕು.
      ಪ್ರಭುತ್ವದ ಯಜಮಾನಿಕೆಯ ವಿರುದ್ಧ ಧ್ವನಿ ಎತ್ತಿದ ಹರಿಹರ, ಬಸವಣ್ಣ ಮತ್ತು ಕುವೆಂಪು ಇತರೆ ಮಹನಿಯರು ಇಂದಿಗೂ ಚರಿತ್ರೆ ಪುಟಗಳಲ್ಲಿ ಜೀವಂತವಾಗಿದ್ದಾರೆ ಎಂದರು.
      ಕವಿಗೋಷ್ಠಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಮಾಜಿ ಸಚಿವೆ ಬಿ.ಟಿ.ಲಲಿತಾ ನಾಯಕ ಮಾತನಾಡಿ, ವಿಧಾನಸೌಧದಲ್ಲಿ ಹೋಮ, ಹವನ ಮತ್ತು ಜ್ಯೋತಿಷ್ಯದಂತಹ ಮೌಡ್ಯಗಳು ಆಚರಣೆ ಆಗತ್ತಿರುವುದು ದುರಷ್ಟಕರ ಎಂದರು.
      ರಾಜಕಾರಣದಲ್ಲಿ ಬದ್ಧತೆ ಮಾಯವಾಗಿದೆ. ನಾಡಿನ ಅಪರೂಪದ ಸಂಪತ್ತು ಬಂಡ ವಾಳಶಾಹಿಗಳ ಪಾಲುಗುತ್ತಿದೆ. ಪರಿಣಾಮ ದೇಶದಲ್ಲಿ ಬಡವರ ಸಂಖ್ಯೆ ಹೆಚ್ಚುತ್ತಿದೆ ಎಂದು ಆತಂಕ ಪಟ್ಟರು.
      ಪ್ರೌಢದೇವರಾಯ ತಾಂತ್ರಿಕ ಮಹಾವಿದ್ಯಾಲಯದ ಆಡಳಿತ ಮಂಡಳಿ ಅಧ್ಯಕ್ಷ ಅರವಿ ಬಸವನಗೌಡ ಅಧ್ಯಕ್ಷತೆವಹಿಸಿದ್ದರು.
      ಜಿಲ್ಲಾ ಕಸಾಪ ಕಾರ್ಯದರ್ಶಿ ಸಿದ್ದರಾಮ ಕಲ್ಮಠ ಕೆ.ಎಸ್‌. ನಾಗರತ್ನಮ್ಮ, ವಿದ್ಯಾಧರ, ಎಸ್‌.ಎಂ.ಶಶಿಧರ, ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಡಾ.ಕೆ.ವೆಂಕಟೇಶ ಕಾರ್ಯದರ್ಶಿ ಟಿ.ಹೆಚ್‌.ಬಸವರಾಜ ಉಪಸ್ಥಿತರಿದ್ದರು.

      logo
      July 14, 2012

      ಹೊಸಪೇಟೆ: ಪ್ರಭುತ್ವದ ಓಲೈಕೆ ಪ್ರಜ್ಞಾವಂತಿಕೆಯ ಲಕ್ಷಣವಲ್ಲ, ಇಂತಹ ಕೆಲಸವು ಆಗಬಾರದು ಎಂದು ಕನ್ನಡ ವಿಶ್ವವಿದ್ಯಾಲಯದ ಡಾ. ರಹಮತ್ ತರೀಕೆರೆ ತಿಳಿಸಿದರು.

      ಗುರುವಾರ ಹೊಸಪೇಟೆಯ ಪ್ರೌಢದೇವರಾಯ ತಾಂತ್ರಿಕ ಮಹಾವಿದ್ಯಾಲಯದಲ್ಲಿ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ನೂತನ ಪದಾಧಿಕಾರಿಗಳ ಪದಗ್ರಹಣ   ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
      ನಮ್ಮ ಆಲೋಚನೆ ಹಾಗೂ ಧೋರಣೆಗಳು ಮಾನವನ ಒಳಿತಿ ಗಾಗಿಯೇ ಬಳಕೆಯಾಗಬೇಕು ಎಂದರಲ್ಲದೆ ಪ್ರಭುತ್ವದ ಯಜಮಾನಿಕೆ ವಿರುದ್ಧ ಧ್ವನಿಯತ್ತಿದ ಹರಿಹರ, ಬಸವಣ್ಣ ಮತ್ತು ಕುವೆಂಪು ಚರಿತ್ರೆಯಲ್ಲಿ ಜೀವಂತವಾಗಿದ್ದಾರೆ ಎಂದರು.  

      ವರ್ತಮಾನದ ದಿನಗಳಲ್ಲಿ ಧರ್ಮ, ಜಾತಿಯಂತಹ ಕೆಡಕಿನ ಸಂಗತಿಗಳೇ ಹೆಚ್ಚು ವಿಜೃಂಬಿಸಿತ್ತಿರವುದು ಅಪಾಯ ಕರ ಎಂದರಲ್ಲದೆ, ಬರಹಗಾರರು ಇಂಥ ಜನ ವಿರೋಧಿ ಸಂಗತಿಗಳ ವಿರುದ್ಧ ಧ್ವನಿಯತ್ತಬೇಕಾಗಿರುವುದು ಇಂದಿನ ತುರ್ತು ಅನಿವಾರ‌್ಯವಾಗಿದೆ ಎಂದರು.

      ಕವಿಗೋಷ್ಠಿಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಹಿರಿಯ ಸಾಹಿತಿ ಮತ್ತು ಮಾಜಿ ಸಚಿವೆ ಬಿ.ಟಿ.ಲಲಿತಾ ನಾಯ್ಕ  ಮಾತನಾಡಿ, ಸಂವಿಧಾನದ ಕೇಂದ್ರವಾದ ವಿಧಾನಸೌದದಲ್ಲಿ ಹೋಮ, ಹವನ ಮತ್ತು ಜ್ಯೋತಿಷ್ಯದಂತಹ ಮೌಢ್ಯಗಳು ಜರುಗುತ್ತಿರುವುದು ದುರಷ್ಟಕರ ಎಂದರು.

      ರಾಜಕಾರಣಲ್ಲಿ ಬದ್ಧತೆಯೇ ಮಾಯವಾಗಿರುವ ದಿನಗಳಲ್ಲಿ ನಾವಿದ್ದೇವೆ. ನಾಡಿನ ಅಪರೂಪದ ಸಂಪತ್ತು ಬಂಡವಾಳಶಾಹಿಗಳ ಪಾಲಾ ಗುತ್ತಿರುವುದರಿಂದ ದೇಶದಲ್ಲಿ ಬಡತನ ಹೆಚ್ಚಾಗುತ್ತಿದೆ ಎಂದರು. 

      ಅರುಣ ಜೋಳದ ಕೂಡ್ಲಿಗಿ, ಡಾ.ಕೆ.ಪನ್ನಂಗಧರ, ಡಾ. ಬಿ. ಜಿ. ಕನಕೇಶಮೂರ್ತಿ, ಎಚ್.ಬಿ.ರವೀಂದ್ರ ಸಾಗರ,  ವಿ.ಹರಿನಾಥಬಾಬು, ಸೋಮೇಶ ಉಪ್ಪಾರ, ಟಿ.ಎಂ. ಉಷಾರಾಣಿ, ಡಾ.ಎಂ.ಮಲ್ಲಿಕಾರ್ಜುನ, ಎಚ್.ಎಂ.ಜಂಬುನಾಥ, ಪಂಪಾ ಮಹೇಶ, ನೂರ್ ಜಹಾನ್, ಉಮಾ ಮಹೇಶ್ವರ, ಸೈಯದ್ ಹುಸೇನ್ ಮತ್ತು ಡಿ.ಬಿ.ನಾಯಕ್ ಕವಿತೆ ವಾಚಿಸಿದರು.

      ಪ್ರೌಢದೇವರಾಯ ತಾಂತ್ರಿಕ ಮಹಾವಿದ್ಯಾಲಯದ ಅಧ್ಯಕ್ಷ ಅರವಿ ಬಸವನಗೌಡರ ಅಧ್ಯಕ್ಷತೆ ವಹಿಸಿದ್ದರು, ಸಾಲಿ ಸಿದ್ದಯ್ಯ ಸ್ವಾಮಿ,  ಎಲ್. ಸಿದ್ದನಗೌಡ, ಷಾ. ರತನ್‌ಚಂದ್, ಖಾಜಾ ಹುಸೇನ್ ನಿಯಾಜಿ, ಜಿಲ್ಲಾ ಕಾರ್ಯದರ್ಶಿ ಸಿದ್ದರಾಮ ಕಲ್ಮಠ, ಕೆ.ಎಸ್. ನಾಗರತ್ನಮ್ಮ, ವಿದ್ಯಾಧರ, ಎಸ್.ಎಂ. ಶಶಿಧರ, ತಾಲ್ಲೂಕು ಅಧ್ಯಕ್ಷ ಡಾ.ಕೆ.ವೆಂಕಟೇಶ, ಕಾರ್ಯದರ್ಶಿ ಟಿ.ಎಚ್.ಬಸವರಾಜ, ಅಗಳಿ ಪಂಪಾಪತಿ, ಲಿಂಗಾರೆಡ್ಡಿ, ಟಿ.ಎಂ. ನಾಗಭೂಷಣ ಹಾಗೂ ಇತರರು ಉಪಸ್ಥಿತರಿದ್ದರು.

      ಈ ಸಂದರ್ಭದಲ್ಲಿ ಕನ್ನಡ ಸಾಹಿತ್ಯ ಪರಿಷತ್‌ನ ನಿಕಟ ಪೂರ್ವ ಅಧ್ಯಕ್ಷೆ ಡಾ. ಡಿ.ಎನ್. ಸುಜಾತ ರೇವಣಸಿದ್ದಪ್ಪ ಅವರನ್ನು ಸನ್ಮಾನಿಸಲಾಯಿತು.


No comments:

Post a Comment