Saturday, August 25, 2012

ವೀವಿ ಸಂಘಕ್ಕೆ ವೈದ್ಯಕೀಯ ಕಾಲೇಜು: ಸಚಿವ ಬಸವರಾಜ ಬೊಮ್ಮಾಯಿ

logo

ಹೊಸಪೇಟೆ: ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ನಮ್ಮ ಶೈಕ್ಷಣಿಕ ಮಟ್ಟ ಮಾತ್ರ ಎಲ್ಲಾ ಹಂತದ ಸವಾಲುಗಳನ್ನು ಮೆಟ್ಟಿನಿಲ್ಲುವ ಆತ್ಮಸ್ಥೈರ್ಯ ನೀಡಬಲ್ಲದು ಎಂದು ಬೃಹತ್ ಹಾಗೂ ಮಧ್ಯಮ ನೀರಾವರಿ ಸಚಿವ ಬಸವರಾಜ ಬೊಮ್ಮಯಿ ಹೇಳಿದರು. 

ಹೊಸಪೇಟೆಯ ಪ್ರೌಢದೇವರಾಯ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಬಳ್ಳಾರಿಯ ವೀರಶೈವ ವಿದ್ಯಾವರ್ಧಕ ಸಂಘ ಆಯೋಜಿಸಿದ್ದ ವಿವಿಧ ಕಟ್ಟಡ ಉದ್ಘಾಟಿಸಿ ಮಾತನಾಡಿದರು.

ಹಿಂದುಳಿದ ಹೈದರಾಬಾದ್ ಕರ್ನಾಟಕದ ಶೈಕ್ಷಣಿಕ ಪ್ರಗತಿಗೆ ಹಗಲಿರುಳು ದುಡಿಯುತ್ತಿರುವ ವೀರಶೈವ ವಿದ್ಯಾವರ್ಧಕ ಸಂಘಕ್ಕೆ ವೈದ್ಯಕೀಯ ಶಿಕ್ಷಣ ಕಾಲೇಜು ಆರಂಭಿಸಲು ಸರ್ಕಾರದಿಂದ ಎಲ್ಲ ಅಗತ್ಯ ನೆರವು ನೀಡುವುದಾಗಿ ಹೇಳಿದರು. 

ಹಿಂದೆ ಪರಂಪರಾಗತವಾಗಿ ಬಂದಿರುವ, ನಂತರ ಹಣವುಳ್ಳವರು, ಈಗ ಜ್ಞಾನ ಹೊಂದಿರುವವರು ಮಾತ್ರ ಆಳ್ವಿಕೆ ಹಾಗೂ ಅಧಿಕಾರ ನಡೆಸಲು ಸಾಧ್ಯವಾಗಿರುವ ಸನ್ನಿವೇಶದಲ್ಲಿ ಜ್ಞಾನಾರ್ಜನೆಗೆ ಒತ್ತು ನೀಡಬೇಕಾಗಿದೆ ಈ ಜ್ಞಾನ ಸಮಾಜದ ಒಳಿತಿಗಾಗಿ ಬಳಕೆಯಾಗಬೇಕು. ಆ ಮೂಲಕ ತಂದೆ ತಾಯಿ, ಗುರುಗಳು ಹಾಗೂ ಸಮಾಜಕ್ಕೆ ಋಣಿಗಳಾಗಿ ಸೇವೆಸಲ್ಲಿಸಿ ಪ್ರಗತಿಗೆ ಕಾರಣವಾಗಬೇಕು ಎಂದರು. 

ಆಶೀರ್ವಚನ ನೀಡಿದ ಸಂಗನಬಸವ ಸ್ವಾಮೀಜಿ, ಶೈಕ್ಷಣಿಕ ಪ್ರಗತಿಯಲ್ಲಿ ಒಂದು ಶತಕ ಇತಿಹಾಸ ಹೊಂದಿರುವ ಈ ಸಂಸ್ಥೆ ಉತ್ತಮ ಸಮಾಜ ನಿರ್ಮಾಣಕ್ಕೆ ನಾಂದಿಯಾಗಲಿ ಎಂದರು. 

ಕಾರ್ಯಕ್ರಮಕ್ಕೂ ಮೊದಲು ವಿಜಯನಗರ ಕಾಲೇಜಿನಲ್ಲಿ ಸ್ನಾತಕೋತ್ತರ ಪದವಿ ಕಟ್ಟಡ, ಮುನಿರಾಬಾದ್‌ನಲ್ಲಿ ಪದವಿಪೂರ್ವ ಕಾಲೇಜು ಕಟ್ಟಡ ಹಾಗೂ ಪ್ರೌಢದೇವರಾಯ ತಾಂತ್ರಿಕ ಮಹಾ ವಿದ್ಯಾಲಯದಲ್ಲಿ ಗ್ರಂಥಾಲಯ ಕಟ್ಟಡಗಳನ್ನು ಉದ್ಘಾಟಿಸಿಲಾಯಿತು. 

ಈ ಸಂದರ್ಭದಲ್ಲಿ ಅಧ್ಯಕ್ಷ ಅಲ್ಲಂ ಗುರು ಬಸವರಾಜ, ಶಾಸಕರಾದ ಕರಡಿ ಸಂಗಣ್ಣ, ಹಾಲಪ್ಪಾಚಾರ್ಯ, ಬಸವರಾಜ ಬ್ಯಾಗವಾಟಿ, ಮಾಜಿ ಸಚಿವ ಅಲ್ಲಂ ವೀರಭದ್ರಪ್ಪ, ಮಾಜಿ ಸಂಸದ ಕೋಳೂರು ಬಸವನಗೌಡ, ಅಲ್ಲಂ ದೊಡ್ಡಪ್ಪ, ಗುರುಸಿದ್ಧಸ್ವಾಮಿ, ಸಂಗನಕಲ್ಲು ಹಿಮಂತರಾಜ, ಅರವಿ ಬಸವನಗೌಡ, ಸಾಲಿ ಸಿದ್ಧಯ್ಯ ಸ್ವಾಮಿ, ಈಶಪ್ಪ ಸೊನ್ನದ, ಸೇರಿದಂತೆ ಆಡಳಿತ ಮಂಡಳಿಯ ಸದಸ್ಯರು, ಸಂಘದ ಸದಸ್ಯರು, ಉಪನ್ಯಾಸಕರು ಹಾಗೂ  ವಿದ್ಯಾರ್ಥಿಗಳು ಹಾಜರಿದ್ದರು.

No comments:

Post a Comment