Sunday, April 22, 2012

HOD was the Chief Guest in the 'Putani Vijnana' Function at Hospet




"ಹುಟ್ಟುವ ಪ್ರತಿ ಮಗುವೂ, by birth,  ವಿಜ್ಞಾನಿಯೇ!"


 

'Putani Vijnana' Function at Hotel Malligi, Hospet on 22-4-2012.. 
Teachers from all districts of Karnataka attended.
KJVS Jt Secretary & PDIT EC HOD SM Shashidhar, Chief Editor Challakere Yarriswamy, 
National Awardee Teacher Malla Reddy from Chikmagalur and Pandurangappa from Nidasosi in the photo.

"ಹುಟ್ಟುವ ಪ್ರತಿ ಮಗುವೂ, by birth,  ವಿಜ್ಞಾನಿಯೇ; ಯಾವ ಮಗುವೂ ಪ್ರಶ್ನಿಸದೇ ಏನನ್ನೂ ಒಪ್ಪಿಕೊಳ್ಳುವುದಿಲ್ಲ. ಬೆಂಕಿ ಸುಡುತ್ತದೆ ಎಂದು ಹೇಳಿದರೆ, ಅದನ್ನೂ ಮುಟ್ಟಿಯೇ ಮನದಟ್ಟು ಮಾಡಿಕೊಳುತ್ತದೆ. ನಮ್ಮ ಶಿಕ್ಷಣ, ನಮ್ಮ ಸಮಾಜ ಮಗುವಿನಲ್ಲಿರುವ ಕುತೂಹಲವನ್ನು ಅರಳಿಸುವ  ಕೆಲಸ ಮಾಡಬೇಕು. ದುರದೃಷ್ಟವಶಾತ್ ಅವು  ಕುತೂಹಲವನ್ನು ಹತ್ತಿಕ್ಕುವ ಕೆಲಸ ಮಾಡುತ್ತಿವೆ. "

"ಜ್ಯೋತಿಷ್ಯ ಪಂಡಿತರು, ವಾಸ್ತು ,  ಪ್ರಳಯ , ಪುನರ್ಜನ್ಮ, ಭೂಕಂಪ   ಪಂಡಿತರು, ಪವಾಡ ಪುರುಷರು ಟೀವಿಯಂಥ ಪ್ರಬಲ ಮಾಧ್ಯಮವನ್ನು ಬಳಸಿಕೊಂಡು ವ್ಯವಸ್ಠಿತವಾಗಿ ಜನರ ಬ್ರೇನ್ ವಾಷ್  ಮಾಡುತ್ತಿದ್ದಾರೆ. ಜನರ ಅಜ್ಣಾನ, ನೋವು, ಸಂಕಟಗಳೇ ಅವರ ಬಂಡವಾಳ!  ಮಾಧ್ಯಮಗಳಲ್ಲಿ ಪ್ರಕಟವಾದ ಸುದ್ದಿಗೆ ಒಂದು ವಿಶ್ವಾಸಾರ್ಹತೆ ಇರುತ್ತೆ ಅಂತ ನಮ್ಮ ಜನರೂ ಅಂಥ ವಿಷಯಗಳನ್ನು ನಂಬಿ ಮೌಢ್ಯದ   ದಾಸರಾಗುತ್ತಿದ್ದಾರೆ. ಇಂಥ ಸನ್ನಿವೇಶದಲ್ಲಿ ಜನರಲ್ಲಿ ವೈಜ್ಣಾನಿಕ ಮನೋಭಾವ ಬೆಳೆಸುವ ಹೊಣೆಯನ್ನು ವಿಜ್ಣಾನ ಬಲ್ಲ  ನವೆ ಅಲ್ಲದೆ ಮತ್ತಾರು   ನಿರ್ವಹಿಸ ಳು ಸಾಧ್ಯ?."

"ಜ್ಯೋತಿಷ್ಯ, ಪವಾಡ, ಕಂದಾಚಾರಗಳನ್ನು ಸುಶಿಕ್ಷಿತರು ನಮಬುತ್ತಾರೆ. ಅಷ್ಟೇ ಏಕೆ? ಅವನ್ನು ನಂಬುವ  ವಿಜ್ಣಾನಿಗಳನ್ನೂ ನಾವು ನೋಡುತ್ತೇವೆ. ಈ ದ್ವಂದ್ವಕ್ಕೆ ಕಾರಣಗಳೇನು? ಇದು ವಿಜ್ಣಾನದತ್ತ ನಡೆಯುತ್ತಿರುವ ಸಮಾಜದ ಸಂಕ್ರಮಣ ಸನ್ನಿವೇಶ. ವಿಜ್ಞಾನಕ್ಕೆ ಕೇವಲ ನೂರಾರು ವರ್ಷಗಳ ಇತಿಹಾಸ. ಆದರೆ ಮಾನವ ಕುಲಕ್ಕೆ ಲಕ್ಷ , ಕೋಟಿ ವರ್ಷಗಳ ಇತಿಹಾಸವಿದೆ.  ಸಾವಿರಾರು ವರ್ಷಗಳಿಂದ ಬಂದ ಆಚರಣೆಗಳು ನಮ್ಮ ಮಾಂಸ , ಮಜ್ಜೆಗಳಲ್ಲಿ ಸೇರಿಹೋಗಿವೆ. ಅಂಥ ಆಚರಣೆಗಳು ತಪ್ಪು ಎಂದು ಮನವರಿಕೆಯಾಗಿ ಸಂಪೂರ್ಣವಾಗಿ ವಿಜ್ಣಾನವನ್ನು ಅಪ್ಪಿಕೊಳ್ಳಲು ಇನ್ನೂ ಸಮಯ ಹಿಡಿದೀತು. ಮತ್ತೊಂದು ಕಾರಣವಿದೆ; ಈಗಿನ ತಲೆಮಾರಿನ ಬಹುತೇಕರು ವಿಜ್ಞಾನವನ್ನು ಕೇವಲ ಶಿಕ್ಷಣದ ಒಂದು ವಿಷಯವಾಗಿ ಕಲಿತವರು, ಅವರ ಸುತ್ತ ಕಾನುತ್ತಿದ್ದುದೆಲ್ಲವು ಮೌದ್ಫ್ಹ್!  ವಯಸ್ಕರಾಗಿ "ವಿಜ್ಞಾನವನ್ನು ಕಲಿತವರು ಬದುಕಿನುದ್ದಕ್ಕೂ ಇಂಥ ದ್ವಂದ್ವಕ್ಕೆ , ಗೊಂದಲಕ್ಕೆ ಒಳಗಾದ ವ್ಯಕ್ತಿಗಲಾಗಿಯೇ ಉಳಿಯುವ ಸಾಧ್ಯತೆ ಹೆಚ್ಚು. 

" ಬಾಲ್ಯವೆಂಬುದು  ವೈಜ್ಣಾನಿಕ ಮನೋಭಾವ ಬೆಳೆಸಲು ಅತ್ಯಂತ ಫಲವತ್ತಾದ, ಫಲಪ್ರದವಾಗಬಲ್ಲ ಕಾಲ. ಸಹಜವಾಗಿಯೇ ಪ್ರಯೋಗಶೀಲವಾಗಿರುವ, ವಿಜ್ಣಾನಿಯಾಗಿರುವ  ಮಗುವಿನ ಮೆದುಳಿಗೆ  'ಕಸ'ವನ್ನು ತುಂಬುವುದನ್ನು  ತಪ್ಪಿಸಿದರೆ, ಅಷ್ಟೇ ಸಾಕು. ಆ ಮಗು ವಯಸ್ಕನಾಗಿಯೂ ವಿಜ್ಣಾನಿಯಾಗಿಯೇ ಉಳಿಯುತ್ತದೆ, ಬೆಳೆಯುತ್ತದೆ. 'ಪುಟಾಣಿ ವಿಜ್ಣಾನ' ಈ ದಿಸೆಯಲ್ಲಿ ಉತ್ತಮ ಕೆಲಸ ಮಾಡುತ್ತಿದೆ."
-ಎಸ್.ಎಂ.ಶಶಿಧರ್
(Excerpts from the  speech of SM Shashidhar)